ಬಾಟ್ಕನ್, ಬೆಂಜಮಿನ್ ಆಲ್ಬರ್ಟ್
1901. ಅಮೆರಿಕೆಯ ಜಾನಪದ ವಿದ್ವಾಂಸ. ಹಾರ್ವರ್ಡ್ ಮತ್ತು ಕೊಲಂಬಿಯ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ. 1931ರಲ್ಲಿ ನೆಬ್ರಾಸ್ಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ, ಓಕ್ಲ ಹೋಮ್ ವಿಶ್ವವಿದ್ಯಾಲಯದಲ್ಲಿ ಜಾನಪದತಜ್ಞನಾಗಿ ಕೆಲಸ. ಅಲ್ಲಿಯ ಜನಪದ ಸಂಸ್ಥೆಯ ಅಧ್ಯಕ್ಷನಾಗಿಯೂ ದುಡಿದ. ಪ್ರಸಿದ್ಧ ಜಾನಪದ ಪತ್ರಿಕೆಯ ಸಂಪಾದಕ. ಅದರ ಮಾತೃಸಂಸ್ಥೆಯಾದ ಅಮೆರಿಕನ್ ಫೋಕ್-ಲೋರ್ ಸೊಸೈಟಿಯ ಅಧ್ಯಕ್ಷನಾಗಿಯೂ ಇದ್ದ. ಫೋಕ್ಸ್‍ಸೇ ಎಂಬ ಪ್ರಾಂತೀಯ ನಿಯತಕಾಲಿಕದ (4 ಸಂಪುಟಗಳು; 1929-32) ಸಂಪಾದಕನಾಗಿ, ಆರ್‍ಕೈವ್ಸ್ ಆಫ್ ಅಮೆರಿಕನ್ ಫೋಕ್ ಸಾಂಗ್ ಸಂಸ್ಥೆಯ ಸಚೇತಕನಾಗಿ, ಲೈಬ್ರರಿ ಆಫ್ ಕಾಂಗ್ರೆಸ್‍ನಂಥ ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯನಾಗಿ ದುಡಿದ. ಈತನ ಡಾಕ್ಟರೇಟ್ ಪ್ರಬಂಧ ದಿ ಅಮೆರಿಕನ್ ಪ್ಲೇ-ಪಾರ್ಟಿ ಸಾಂಗ್ (1937) ಹೆಸರಾದುದು. 								
(ಎಚ್.ಎಸ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ